Bs7 ....ಏನಿದು ಭಾರತ್ ಸ್ಟೇಜ್ ????...
ನಮ್ಮ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ವಾಹನಗಳ ದಟ್ಟಣೆ ಕೂಡ ಹೆಚ್ಚಾಗಿದ್ದು. ಇನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಬಹುದು. ಈ ಕಾರಣದಿoದಲೇ ಈ ಎಮಿಷನ್ ಸ್ಟ್ಯಾಂಡರ್ಡ್ ನ್ನು ಪರಿಚಯಸಲಾಯಿತು.
ಭಾರತ್ ಸ್ಟೇಜ್ ಎಂದರೆ ನಮ್ಮ ದೇಶದ
ಸರ್ಕಾರಗಳು ವಾಹನ ತಯಾರಿಕೆ ಮಾಡುವ ಕಂಪನಿ ಗಳ ಮೇಲೆ ಕೆಲವೊಂದು ನಿಬಂದನೆಗಳನ್ನೂ ಕೊಟ್ಟಿರುತ್ತವೆ.ಇದನ್ನು ನಮ್ಮ ದೇಶದ CENTRAL POLLUTION CONTROL BOARD ಅವರು ಇದರ ನೀರ್ವಹನೆ ಮಾಡುತ್ತಾರೆ.
ಇದನ್ನು
ಮೊದಲು ೨೦೦೦ ಇಸವಿಯಲ್ಲಿ ಜಾರಿಗೆ ತರಲಾಯಿತು.
ಇದನ್ನು ಮೊದಲು ಜಾರಿಗೆ ತಂದದ್ದು ಯುರೋಪ್ ನಲ್ಲಿ.
ವಾಹನಗಳಿಂದ ಹೊರ ಬರುವ ಹೊಗೆಯಲ್ಲಿ ಕೆಲವು
ವಿಷಕಾರಿ ಅನಿಲಗಳು ಇರುತ್ತವೆ. ಇವುಗಳಿಂದ ಪರಿಸರದಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತದೆ,
ಅದರಿಂದ ಇವುಗಳ ಬಳಕೆ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಇ ನಿಯಮವನ್ನು ಪರಿಚಯಿಸಲಾಯಿತು .
ಪೆಟ್ರೋಲ್ ಇಂಜಿನ್ ನ ಬಿ ಎಸ್ ಪ್ರಮಾಣಗಳು..
ಅದರ ಪ್ರಕಾರ ವಾಹನಗಳನ್ನು ತಯಾರಿಸುವ ಕಂಪನಿಗಳು ತಮ್ಮ
ವಾಹನದ ಇಂಜಿನ್ನಿಂದ ಹೊರ ಬರುವ ಹೊಗೆಯಲ್ಲಿ CARBON
DI OXIDE ಹಾಗು ಇತರ
ಅನಿಲ ಗಳ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿರಬಾರದು.
ದಿನೇದಿನೆ ವಾತಾವರಣದ ತಾಪಮಾನ ಏರಿಕೆಯಾಗುತಿದ್ದು , ವಾಹನಗಳ ಸಂಚಾರ ದಟ್ಟಣೆ ಕೂಡ ಹೆಚ್ಚಾಗಿದೆ.
ವಾಯುಮಾಲಿನ್ಯವನ್ನು ಕಡಿಮೆ ಮಾಡುವ ದೃಷ್ಠಿಯಿಂದ ಈ ನಿಯಮವನ್ನು ಜಾರಿಗೆ ತರಲಾಯಿತು. ಇದರ ಪ್ರಕಾರ ವಾಹನಗಳ ಮಾಲಿನ್ಯ ಪ್ರಮಾಣವನ್ನು ೨ ಅಥವಾ ೩ ವರ್ಷಗಳಿಗೆ ಸ್ಟೇಜ್ ಅನ್ನು ಬದಲಿಸುತ್ತಾರೆ. ಅಂದರೆ ಈ ಮೊದಲು BS1 ಅನ್ನು ಜಾರಿಗೆ ತರಲಾಯಿತು. ತದ ನಂತರ ೨೦೦೭ ಅದರ ಮುಂದಿನ ಅವತರಣಿಕೆ BS2 ಮತ್ತು BS3 ಜಾರಿಗೆ ತರಲಾಯಿತು.
BS 5 ಯಾಕೆ ಜಾರಿಗೆ ತರಲಿಲ್ಲ.
ಹೌದು BS 5 ಜಾರಿಗೆ ತರಲಿಲ್ಲ ಏಕೆಂದರೆ ಪರಿಸರದ ಮಾಲಿನ್ಯ ಪ್ರಮಾಣವು ತುಂಬಾನೆ ಹೆಚ್ಚಾಗಿದ್ದು, ಇದಕ್ಕೆ ವಾಹನಗಳ ಹೆಚ್ಚಾದ ಬಳಕೆ ಮತ್ತು ಹೊಸ ವಾಹನ ಗಳ ಖರಿದಿದರಾರ ಸಂಖ್ಯೆ ಹೆಚ್ಚಾಗಿದೆ.
ದಿಲ್ಲಿ ಯಲ್ಲಿ ಕೆಲ ವರ್ಷಗಳಲ್ಲಿ ಮಾಲಿನ್ಯ ಪ್ರಮಾಣ ನಿಯಂತ್ರಣ ತಪ್ಪಿದೆ.
ಇದ್ದನ್ನು ಗಮನದಲ್ಲಿ ಇಟ್ಟುಕೊಂಡು ಸರಕಾರಗಳು ಮಾಲಿನ್ಯ ಪ್ರಮಾಣ ನಿಯಂತ್ರಣ ದಲ್ಲೀ ತರಲು BS5 ನ್ನು ಬಿಟ್ಟು BS 6 ನ್ನು ಜಾರಿಗೆ ತರಲಾಯಿತು.
ಈ ಕಾರಣದಿoದಲೇ ಸರಕಾರಗಳು BS 5 ಅವತರಣಿಕೆಯನ್ನು ತೆಗೆದು ಹಾಕಿ ಅದರ ಮುಂದಿನ ಅವತರಣಿಕೆಯಾದ BS 6 ನ್ನು ಜಾರಿಗೆ ತರಲಾಯಿತು. ಇದರ ಪ್ರಕಾರ ಈ ಮುಂದಿನ BS 4 ಗಿಂತ BS6 , ಮಾಲಿನ್ಯದ ಪ್ರಮಾಣ ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಡೈ ಆಕ್ಸೈಡನ್ನು ಬಿಡುಗಡೆ ಮಾಡಬೇಕು.
ಇನ್ನು ಮುಂದಿನ ದಿನಗಳಲ್ಲಿ ಭಾರತ್ ಸ್ಟೇಜ್ ನ ಮುಂದಿನ ಅವತರಣಿಕೆ ಯಾದ BS7 ಬರುತ್ತದೆ. ಸರಕಾರಗಳು ಪರಿಸರದಲ್ಲಿ ಆಗುವ ಮಾಲಿನ್ಯ ಪ್ರಮಾಣ ವನ್ನು ಗಮನಿಸಿಕೊಂಡು ನಿಯಮಗಳನ್ನು ಜಾರಿಗೆ ತರುತ್ತರೆ.
ಹಾಗೂ ಇನ್ನು ಮುಂದೆ Bs6 ಇದು ಅವತರಣಿಕೆಯ ಹಿಂದಿನ ಯವು ದೇ ವಾಹನಗಳನ್ನು ಯಾವುದೇ ವಾಹನ ತಯಾರಕಾ ಕಂಪೆನಿಗಳು ಮಾರುಕಟ್ಟೆ ಯಲ್ಲಿ ಮಾರ ಬಾರದು ಎಂದು ಕೋರ್ಟು ನಲ್ಲಿ ತೀರ್ಪು ನೀಡಿದೆ.
ಯಾವುದೇ ರೀತಿಯಾದ ಕಾನೂನು ನಿಯಮಗಳು ಜಾರಿಗೆ ಬಂದರೂ ಮರಗಳ ನಾಶ ಮತ್ತು ಕಾಡು ಗಳ ನಾಶದಿಂದ
ಭೂಮಿಯ ತಾಪಮಾನ ದಲ್ಲಿಯೂ ಏರಿಕೆ ಯಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ